ಅಭಿಪ್ರಾಯ / ಸಲಹೆಗಳು

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಸಾಮಾನ್ಯವಾಗಿ  ಕೇಳಲಾಗುವ ಪ್ರಶ್ನೆಗಳು:

1.KSUWSSB-RA ಪೋರ್ಟಲ್‍ನಲ್ಲಿ ನಾನು ಹೇಗೆ ನೋಂದಾಯಿಸಿಕೊಳ್ಳುವುದು?

  ‘ಲಾಗಿನ್’ಗೆ ಹೋಗಿ ಮತ್ತು ವಿವರಗಳನ್ನು ಸಲ್ಲಿಸುವ ಮೂಲಕ ನೋಂದಾಯಿಸಿ.

2.ಈ ವೆಬ್‍ಸೈಟ್‍ನಲ್ಲಿ ನೋಂದಾಯಿಸಿದ ನಂತರ ನಾನು ನನ್ನ ವೈಯಕ್ತಿಕ ವಿವರಗಳನ್ನು ತಿದ್ದಬಹುದೇ?

  ಹೌದು, ನಿಮ್ಮ ರುಜುವಾತುಗಳೊಂದಿಗೆ ನೀವು ಲಾಗಿನ್ ಮಾಡಬಹುದು ಮತ್ತು ‘edit profile‘  ಆಯ್ಕೆ ಮಾಡಬಹುದು. ಅವಶ್ಯಕ ಬದಲಾವಣೆ ಮಾಡಿದ ನಂತರ    ‘Save Button’ ಮೇಲೆ ಕ್ಲಿಕ್ ಮಾಡಿ.

3.ಈ ವೆಬ್‍ಸೈಟ್‍ನಲ್ಲಿ ನಾನು ಉದ್ಯೋಗಗಳನ್ನು ಹೇಗೆ ಹುಡುಕುವುದು?

   ವೆಬ್‍ಸೈಟ್‍ನಲ್ಲಿ ಉದ್ಯೋಗಗಳನ್ನು ಹುಡುಕುವುದು ತುಂಬಾ ಸುಲಭ. ಕೀವರ್ಡ್ ಬಾಕ್ಸ್‍ನಲ್ಲಿ ಶೀರ್ಷಿಕೆ, ದೇಶ, ಸೆಕ್ಟರ್‍ನಂತಹ ಕೆಲಸಕ್ಕೆ ಸಂಬಂಧಿಸಿದ                 ಕೀವರ್ಡ್‍ಗಳನ್ನು ಟೈಪ್ ಮಾಡಿ ಮತ್ತು ಡ್ರಾಪ್-ಡೌನ್ ಮೆನು ಮೂಲಕ ವಿವಿಧ ಆಯ್ಕೆಗಳಿಂದ ಆಯ್ಕೆಮಾಡಿದಲ್ಲಿ ನಿಮಗೆ ಸಂಬಂಧಿಸಿದ ಫಲಿತಾಂಶಗಳು             ಗೋಚರಿಸುತ್ತವೆ.

4.KSUWSSB (RA-K) ಅನ್ನು ಯಾರು ನಡೆಸುತ್ತಾರೆ?

  ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ (KSUWSSB) ಒಂದು ರಾಜ್ಯ  ಸರ್ಕಾರ ಚಾಲಿತ ನೇಮಕಾತಿ ಏಜೆನ್ಸಿಯಾಗಿದ್ದು, ಪ್ರೋಟೆಕ್ಟರ್ ಜನರಲ್ ಆಫ್ ಎಮಿಗ್ರೆಂಟ್ಸ್ (PGE),ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA),ಭಾರತ ಸರ್ಕಾರ (GoI) ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆ.

5.ನಾನು KSUWSSB (RA-K) ಅನ್ನು ಹೇಗೆ ಸಂಪರ್ಕಿಸಬಹುದು?

  ಈ ಕೆಳಗೆ ನೀಡಲಾದ ವಿಳಾಸದ ಕಛೇರಿಗೆ ನೇರವಾಗಿ ಭೇಟಿ ನೀಡುವ ಮೂಲಕ ನೀವು ನೇರವಾಗಿ ನೇಮಕಾತಿ ಏಜೆನ್ಸಿಯನ್ನು ಸಂಪರ್ಕಿಸಬಹುದು. ಕಛೇರಿ ಸಮಯ – 10.00 ರಿಂದ ಸಂಜೆ 06.00, ಸೋಮವಾರದಿಂದ ಶನಿವಾರದವರೆಗೆ (2ನೇ ಮತ್ತು 4ನೇ ಶನಿವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ).

ನೀವು ನಮ್ಮನ್ನು ಸಹ ಸಂಪರ್ಕಿಸಬಹುದು.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ

3ನೇ ಮಹಡಿ, ಕಲ್ಯಾಣ ಸುರಕ್ಷಾ ಭವನ, ಐಟಿಐ ಕಾಲೇಜು ಕಾಂಪೌಡ್,

ಡೈರಿ ಸರ್ಕಲ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560029

ಸ್ಥಿರ ದೂರವಾಣಿ ಸಂಖ್ಯೆ:080-26631583/584

ಇ-ಮೇಲ್: ksuwssb-ora@karnataka.gov.in

ಸಹಾಯವಾಣಿ ಸಂಖ್ಯೆ:155214

6.RA-K ನನಗೆ ಹೇಗೆ ಸಹಾಯ ಮಾಡುತ್ತದೆ?

ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

7.ಸೇವಾ ಶುಲ್ಕವನ್ನು ಯಾವಾಗ ಪಾವತಿಸಬೇಕು?

ಅಭ್ಯರ್ಥಿಯು ಉದ್ಯೋಗ ಒಪ್ಪಂದವನ್ನು ಸ್ವೀಕರಿಸಿದ ನಂತರವೇ ಸೇವಾ ಶುಲ್ಕವನ್ನು ಪಾವತಿಸಬೇಕು.

8.ವಿದೇಶಿ ಉದ್ಯೋಗದಾತರ (FE) ಕುರಿತು ನಾನು ಹೇಗೆ ವಿವರಗಳನ್ನು ತಿಳಿಯಬಹುದು?

ವಿದೇಶಿ ಉದ್ಯೋಗದಾತರ (FE) ವಿವರಗಳನ್ನು ತಿಳಿದುಕೊಳ್ಳಲು, ದಯವಿಟ್ಟು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ:

  1. ವೆಬ್ ಬ್ರೌಸರ್‍ನಲ್ಲಿ http://www.eMigrate.gov.in ಲಿಂಕ್ ಬಳಸಿ eMigrate ವೆಬ್‍ಸೈಟ್ ತೆರೆಯಿರಿ.
  2. ಉದ್ಯೋಗದಾರತನ್ನು ನೋಡಿ ಅಥವಾ ಹುಡುಕಿ-> ಉದ್ಯೋಗದಾತರನ್ನು ಹುಡುಕಿ
  3. ಉದ್ಯೋಗದಾತರ ಹೆಸರು/ಉದ್ಯೋಗದಾತರ ಐಡಿಯನ್ನು ನಮೂದಿಸಿ ಮತ್ತು ಹುಡುಕಿ, ವಿದೇಶಿ ಉದ್ಯೋಗದಾತರ ವಿವರಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

9.ನಾನು ನೋಂದಾಯಿತ ನೇಮಕಾತಿ ಏಜೆಂಟ್ (ಖಂ) ನ ವಿವರಗಳನ್ನು ತಿಳಿದುಕೊಳ್ಳಬಹುದೇ?

ದಯವಿಟ್ಟು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ:

  1. ವೆಬ್ ಬ್ರೌಸರ್‍ನಲ್ಲಿ http://www.eMigrate.gov.in ಲಿಂಕ್ ಬಳಸಿ eMigrate ವೆಬ್‍ಸೈಟ್ ತೆರೆಯಿರಿ.
  2. “ನೇಮಕಾತಿ ಏಜೆಂಟ್‍ನ್ನು ನೋಡಿ” ಅಥವಾ ಹುಡುಕಿ- (RA) ಅನ್ನು ಹುಡುಕಿ
  3. ಏಜೆಂಟ್ ಹೆಸರು/ಏಜೆಂಟ್ ಐಡಿಯನ್ನು ನಮೂದಿಸಿ ಮತ್ತು ಸಲ್ಲಿಸಿ. ನೇಮಕಾತಿ ಏಜೆನ್ಸಿಯ ವಿವರಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

10.ವಿದೇಶಿ ಉದ್ಯೋಗದಾತರು/ನೇಮಕಾತಿ ಏಜೆಂಟ್ ವಿರುದ್ದ ಹೇಗೆ ಕುಂದು-ಕೊರತೆಯನ್ನು ಸಲ್ಲಿಸಬಹುದು. ಹಾಗೂ ಅನುಸರಿಸಬೇಕಾದ ಹಂತಗಳು ಯಾವುವು:-

 ವಿದೇಶಿ ಉದ್ಯೋಗದಾತರು/ನೇಮಕಾತಿ ಏಜೆಂಟ್ ವಿರುದ್ದ ಕುಂದುಕೊರತೆ ಸಲ್ಲಿಸಲು ಈ ಕೆಳಕಂಡ 4 ವಿಧಾನಗಳನ್ನು ಅನುಸರಿಸಬಹುದು.

  1.  ದಯವಿಟ್ಟು ಪ್ರವಾಸಿ ಭಾರತೀಯ ಸಹಾಯತಾ ಕೇಂದ್ರ (PBSK)ಕ್ಕೆ ಕರೆಮಾಡಿ ದೂ.ಸಂ. 1800-11-3090 (24*7 ಸಹಾಯವಾಣಿ ಭಾರತೀಯ 11         ಭಾಷೆಗಳಲ್ಲಿ)/+91-11-26885021.

         Email:helpline@mea.gov.in; helpline@owrc.in

2.ಪ್ರವಾಸಿ ಭಾರತೀಯ ಸಹಾಯತಾ ಕೇಂದ್ರ (PಃSಏ)ದ ಅಧಿಕಾರಿಗಳು ನಿಮ್ಮ ಕುಂದುಕೊರತೆಯನ್ನು ದಾಖಲಿಸುತ್ತಿದ್ದು, ಪರಿಹಾರದ ಕುರಿತು ಮಾಹಿತಿ                 ಪಡೆಯಲು ಅರ್ಜಿ ಸಂಖ್ಯೆಯನ್ನು ನೀಡುತ್ತಾರೆ.

      ನೀವು ನೇರವಾಗಿ e-Migrate Portal ನಲ್ಲಿ ಕುಂದುಕೊರತೆಯನ್ನು ಸಲ್ಲಿಸಲು ಇಚ್ಚಿಸಿದಲ್ಲಿ, ದಯವಿಟ್ಟು ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ.

  1.   ವೆಬ್ ಬ್ರೌಸರ್‍ನಲ್ಲಿ http://www.eMigrate.gov.in ತೆರೆಯಿರಿ
  2.   e-Migrate  ಹೋಗಿ -> ಕುಂದುಕೊರತೆ ಸಲ್ಲಿಸಿ. (ಅರ್ಜಿ ನಮೂನೆ ಪ್ರದರ್ಶಿತವಾಗುವುದು).
  3.   ಆನ್‍ಲೈನ್‍ದಲ್ಲಿ ಅರ್ಜಿಯನ್ನು ಭರ್ತಿಮಾಡಿ ಹಾಗೂ ಸಲ್ಲಿಸಿ.
  4.  ಕುಂದುಕೊರತೆಯು ನೋಂದಣಿಯಾಗುವುದು ಹಾಗೂ ಸಂಬಂಧಿಸಿದ ಇಲಾಖೆಗೆ ಕಳುಹಿಸುವುದು

3.ನೀವು MADAD ಗೆ ಕರೆ ಮಾಡಬಹುದು ಅಥವಾ ಕುಂದುಕೊರತೆ ನಿವಾರಣಾ ವೇದಿಕೆಯಲ್ಲಿ ವಿಷಯವನ್ನು ನೋಂದಾಯಿಸಬಹುದು.

         ದೂ.ಸಂ. 1800-11-3090 (24*7 ಸಹಾಯವಾಣಿ ಭಾರತೀಯ 11 ಭಾಷೆಗಳಲ್ಲಿ)/+91-11-26885021.

         E-mail: helpline@mea.gov.in

         Website: www.madad.gov.in

4.ರಾಜ್ಯಮಟ್ಟದಲ್ಲಿ ಸ್ಥಾಪಿಸಲಾಗಿರುವ ಯಾವುದಾದರೂ 12 Protector of Emigrants (POE)ಯಲ್ಲಿ ಅಥವಾ Protector of Emigrants (POE), Akbar Bhavan,Chanakyapuri New Delhi ಇಲ್ಲಿ ದೂರು ದಾಖಲಿಸಬಹುದು.

              Protector of Emigrants (POE),

              ಬೆಂಗಳೂರು ಕಛೇರಿ ವಿಳಾಸ:-

              ಕೊಠಡಿ ಸಂಖ್ಯೆ:1-4, ಗ್ರೌಂಡ್ ಫ್ಲೋರ್,

              ಆರ್.ಪಿ.ಓ. ಕಟ್ಟಡ, 8ನೇ ಬ್ಲಾಕ್,

              80 ಅಡಿ ರಸ್ತೆ, ಕೆ.ಹೆಚ್.ಬಿ ಗೇಮ್ಸ್ ವಿಲೇಜ್,

               ಕೋರಮಂಗಲ, ಬೆಂಗಳೂರು-560095.

11.MADAD ನಲ್ಲಿ ದೂರು ದಾಖಲಿಸಲು ಅವಶ್ಯಕವಿರುವ ಕಡ್ಡಾಯ ಕ್ಷೇತ್ರಗಳಾವುವು?

 ದಯವಿಟ್ಟು ಕ್ಲಿಕ್ ಮಾಡಿ http://www.madad.gov.in.

12MADAD ನಲ್ಲಿ ದೂರಿನ ಸ್ಥಿತಿಯ ಕುರಿತು ವೀಕ್ಷಿಸಬಹುದು?

MADAD ನಲ್ಲಿ ಮೊಬೈಲ್ ಅರ್ಜಿಯನ್ನು ಉಪಯೋಗಿಸಿ ಅಥವಾ MADAD Portal ನಲ್ಲಿ URL: www.madad.gov.in ನಲ್ಲಿ ದೂರಿನ ಸ್ಥಿತಿಯನ್ನುTrack ಮಾಡಬಹುದು.

  1.  Grievance Registraion ನಲ್ಲಿ ಕ್ಲಿಕ್ ಮಾಡಿ.
  2.  ನಿಮ್ಮ ವಿವರವನ್ನು ನೀಡಿ ಹಾಗೂ ಲಾಗಿನ್ ಐಡಿ ಪಡೆಯಿರಿ.
  3.  MADAD ಮೊಬೈಲ್ ಅರ್ಜಿ ಉಪಯೋಗಿಸಿಯು ಸಹಾ ನಿಮ್ಮ ದೂರಿನ ಸ್ಥಿತಿಯ ಕುರಿತು ಮಾಹಿತಿ ಪಡೆಯಬಹುದು.
  4.  MADAD Mobile Application ನ ಮುಖಪುಟಕ್ಕೆ ಹೋಗಿ.
  5.  Track Grievance Screen ಆಯ್ಕೆ ಮಾಡಿ.
  6.  ನಿಮ್ಮ ಕುಂದುಕೊರತೆ ID, Captcha (Security Code) ಭರ್ತಿಮಾಡಿ ಕ್ಲಿಕ್ ಮಾಡಿ “ಸಲ್ಲಿಸಿ”.

ಇತ್ತೀಚಿನ ನವೀಕರಣ​ : 10-11-2022 04:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080